ಮೊದಲು ಹಾವಾಡಿಗ, ಈಗ ಚಾಯ್-ವಾಲಾ!
ವಿದೇಶಿಗರು ಮೊದಲು ಭಾರತಕ್ಕೆ ಬಂದಾಗ ಹಾವಾಡಿಗರ ಬಗ್ಗೆ ಮಾತಾಡ್ತಾ ಇದ್ರು. ಈಗ ಚಾಯ್-ವಾಲಾನ ಬಗ್ಗೆ ಮಾತಾಡ್ತಾರೆ!
ವಿದೇಶಿಗರು ಮೊದಲು ಭಾರತಕ್ಕೆ ಬಂದಾಗ ಹಾವಾಡಿಗರ ಬಗ್ಗೆ ಮಾತಾಡ್ತಾ ಇದ್ರು. ಈಗ ಚಾಯ್-ವಾಲಾನ ಬಗ್ಗೆ ಮಾತಾಡ್ತಾರೆ!
ನರೇಂದ್ರ ಮೋದಿಗೆ ದಿನಕ್ಕೊಂದು ಪ್ರಶ್ನೆ ಕೇಳುವ ರಾಹುಲ್ ಗಾಂಧಿ ಪಾಲಿಗೆ ಗುಜರಾತ್ ಚುನಾವಣಾ ಪರೀಕ್ಷೆ ಬಹಳ ನಿರ್ಣಾಯಕವೆನಿಸಿದೆ. ಬಹಳಷ್ಟು ಸಮಯ ಹಾಗೂ ಪ್ರಯತ್ನವನ್ನು ಗುಜರಾತ್ ಚುನಾವಣೆಗೆ ವ್ಯಯಿಸುತ್ತಿರುವ ರಾಹುಲ್ ಗಾಂಧಿ ಅಮೇಠಿ ಪೌರ ಚುನಾವಣೆಯನ್ನು ನಿರ್ಲಕ್ಷಿಸಿದ್ದು ಭಾರೀ ವೈಯಕ್ತಿಕ ಕಸಿವಿಸಿಗೆ ಕಾರಣವಾಯ್ತು. ಅಮೇಠಿ ಫಲಿತಾಂಶ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದೆ!
ಉತ್ತರಪ್ರದೇಶದಲ್ಲಿ ಬಿಜೆಪಿ ವಿಜಯಯಾತ್ರೆಯನ್ನು ಗುಜರಾತಿನತ್ತ ಕೊಂಡೊಯ್ಯಲು ಸಿದ್ಧವಾಗುತ್ತಿರುವಂತೆ, ಇತ್ತ ವಿರೋಧ ಪಕ್ಷ ಮತ್ತೊಮ್ಮೆ ಮತಯಂತ್ರಗಳ ಸಾಚಾತನದ ಬಗ್ಗೆ ತಕರಾರು ಎತ್ತಿದೆ. ಇದಕ್ಕೆ ಕಾರಣ ಮತಪತ್ರ ಬಳಸಿರುವ ಉತ್ತರಪ್ರದೇಶದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿರುವುದು. Sify ಕಾರ್ಟೂನು
ಸೋಮನಾಥ ಮಂದಿರ ವಿವಾದದ ಬಳಿಕ ರಾಹುಲ್ ಗಾಂಧಿಯ ಬೆಂಬಲಕ್ಕೆ ನಿಂತ ಕಾಂಗೈ ಪಕ್ಷ, ರಾಹುಲ್ ಕೇವಲ ಹಿಂದೂ ಅಷ್ಟೇ ಅಲ್ಲ, ಜನಿವಾರ ಹಾಕುವ ಹಿಂದೂ ಎನ್ನುತ್ತಾ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿತು! Mail Today ಕಾರ್ಟೂನು
ರಾಹುಲ್ ಗಾಂಧಿಯ ಟೆಂಪಲ್ ರನ್ ವಿವಾದಕ್ಕೊಳಗಾಗಿದೆ! ಇತ್ತೀಚಿಗೆ ರಾಹುಲ್ ಭೇಟಿ ನೀಡಿದ ಸೋಮನಾಥ ಮಂದಿರದ ಹಿಂದುಯೇತರರಿಗಾಗಿ ಇಟ್ಟಿರುವ ಪುಸ್ತಕದಲ್ಲಿ ರಾಹುಲ್ ಗಾಂಧಿ (ಜೀ ಜೊತೆಗೆ) ಹೆಸರು ನಮೂದಾಗಿರುವುದು ಎದುರಾಳಿ ಬಿಜೆಪಿಯಾ ಚುನಾವಣಾ ಪ್ರಚಾರಕ್ಕೆ ಆಹಾರ ನೀಡಿದಂತಾಗಿದೆ!
ಕಾರ್ಟೂನು ರಚಿಸೋದು ಹೇಗೆ? ಹಲವು ಯುವ ಮಿತ್ರರು ಈ ಪ್ರಶ್ನೆಯನ್ನು ಕೇಳಿದಾಗೆಲ್ಲ ನನಗೆ ನನ್ನ ಶಾಲಾ-ಕಾಲೇಜು ದಿನಗಳು ನೆನಪಾಗುತ್ತವೆ. ಆ ದಿನಗಳಲ್ಲಿ ಇಂಟರ್ನೆಟ್ ಇದ್ದಿರಲಿಲ್ಲ.ಈಗಿನಂತೆ ಕಾರ್ಟೂನಿಸ್ಟರೂ ಕೈಗೆ ಸಿಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಕೆಲವು ಕಾರ್ಟೂನಿಸ್ಟರ ಅಪರೂಪದ ಸಂದರ್ಶನ-ಲೇಖನಗಳಲ್ಲಿ ಅಲ್ಲಲ್ಲಿ ಚದುರಿದ ಮಾಹಿತಿಯೇ ನನ್ನಂತವರ ಹಲವರ ಪಾಲಿಗೆ ಟ್ಯುಟೋರಿಯಲ್ಸ್! ಇಂದಿಗೂ ನೆನಪಿದೆ, ನಾನು ಹತ್ತಾರೂ ವ್ಯಂಗ್ಯಚಿತ್ರಕಾರರಿಗೆ ಮಾಹಿತಿಗಾಗಿ ಪೋಸ್ಟ್-ಕಾರ್ಡ್ ಬರೆಯುತ್ತಿದೆ. ಕೆಲವರು ಪ್ರತಿಕ್ರಿಯಿಸುತ್ತಿದ್ದರು. ಕನ್ನಡದಲ್ಲಿ ನಿರಂತರವಾಗಿ ಕಾರ್ಟೂನು ಬರೆಯುತ್ತಿದ್ದ ಬಿ. ಮಂಜು ಎನ್ನುವವರು ನನ್ನ ಪ್ರಶ್ನೆಗಳಿಗೆ ಬಹಳ ತಾಳ್ಮೆಯಿಂದ […]
ಗುಜರಾತಿನಲ್ಲಿ ಬಿಜೆಪಿಯ ಸ್ಟಾರ್ ಜಾದೂಗಾರನ ಮ್ಯಾಜಿಕ್ ಈ ಬಾರಿಯೂ ನಡೆಯುತ್ತಾ?
ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಶುರು ಮಾಡಿದ್ದಾರೆ. ಅವರ ಮಂತ್ರಿ ಮಂಡಲದ ಹೆಚ್ಚಿನೆಲ್ಲ ಸಚಿವರುಗಳು ಈಗಾಗಲೇ ಗುಜರಾತಿನಲ್ಲಿ ಠಿಕಾಣಿ ಹೂಡಿದ್ದಾರೆ. ಅತ್ತ ವಿರೋಧ ಪಕ್ಷಗಳು ಚಳಿಗಾಲದ ಅಧಿವೇಶನದ ವಿಳಂಬದ ಬಗ್ಗೆ ಗೊಣಗಾಡುತ್ತಿದ್ದಾರೆ!
ಗುಜರಾತ್ ಚುನಾವಣೆಯ ಕಾವು ಏರುತ್ತಿದೆ. ಎಲ್ಲ ಪಕ್ಷಗಳು ಹಲವು ರೀತಿಯಲ್ಲಿ ಕಸರತ್ತುಗಳನ್ನು ಮಾಡಿ ಮತದಾರರ ವೋಟು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇತ್ತ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಪ್ರಚಾರ ಸಭೆಗಳಲ್ಲಿ ಜಾದೂಗಾರರನ್ನು ಬಳಸಿ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. Sify cartoon.
ಅತ್ತ ಸುಪ್ರೀಂ ಕೋರ್ಟ್ ಅಯೋಧ್ಯಾ ವಿವಾದ ಕೇಸನ್ನು ಎತ್ತಿಕೊಳ್ಳಲು ಕೆಲವೇ ದಿನಗಳಿರುವಾಗ ಆರ್.ಎಸ್.ಎಸ್. ಮುಖಂಡ ಮೋಹನ್ ಭಾಗವತ್, ರಾಮಮಂದಿರವನ್ನು ವಿವಾದಿತ ಸ್ಥಳದಲ್ಲೇ ನಿರ್ಮಿಸುವುದಾಗಿ ಘೋಷಿಸಿದ್ದಾರೆ.